ಬುಧವಾರ, ನವೆಂಬರ್ 3, 2010

ತೂರಿ ಬಾ ಜಾರಿ ಬಾ

ತೂರಿ ಬಾ, ಜಾರಿ ಬಾ
ಮುಗಿಲ ಸಾರವೇ ಬಾಬಾ
ಸುರಿದು ಬಾ, ಹರಿದು ಬಾ
ಜಲರೂಪಿ ಒಲವೇ ಬಾಬಾ

ಬಾನ ಕಡೆಗೆ ಕೈಯ ನೀಡಿ
ಮುಗಿಲ ನಡೆಗೆ ಕಣ್ಣ ಹೂಡಿ,
ಬಾಯಿ ತೆರೆದು ನಿಂತ ನೆಲದ
ಉರಿವ ದಾಹ ಶಮನ ಮಾಡಿ,
ಮಣ್ಣಿನ ಧಗೆ ತಣಿಸುತ
ತಣ್ಣನೆ ಸುಧೆ ಉಣಿಸುತ,
ದಿವದ ವರವಾಗಿ ಚೆಲ್ಲಿ ಬಾ
ಭವಕೆ ನೆರವಾಗಿ ನಿಲ್ಲು ಬಾ

ಮಿಂಚ ಹೊಳೆಸಿ ಗುಡುಗ ನುಡಿಸಿ,
ಗಿರಿಮುಡಿಗೆ ಅಭಿಷೇಕ ಸಲಿಸಿ,
ಗಾಳಿಯಾನೆ ಬೆನ್ನ ಏರಿ,
ಮಾಡಿ ಮೋಜಿನ ಸವಾರಿ,
ಬಿಸಿಲ ತಲೆ ಹಾರಿಸಿ
ಹಸಿರ ಧ್ವಜ ಏರಿಸಿ
ನೆಲಕೆ ಉಸಿರಾಗಿ ಇಳಿದು ಬಾ
ಇಳೆಯ ಬಾಳನ್ನು ತೊಳೆದು ಬಾ

                                                 - ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Deepika.php

ಕಾಮೆಂಟ್‌ಗಳಿಲ್ಲ: