ಮಂಗಳವಾರ, ನವೆಂಬರ್ 2, 2010

ಯಾರು ಏನೆ ಜರಿಯಲಿ

ಯಾರು ಏನೆ ಜರಿಯಲಿ
ಯಾವ ಹೆಸರೆ ಕರೆಯಲಿ
ತಾಳಿ ನಿಲ್ಲು ಜೀವವೇ
ಸಹನೆ ಗೆಲ್ಲಲಿ

ಆಡಲೆಂದೆ ಕೆಲವರು
ಕಾಡಲೆಂದೆ ಕೆಲವರು
ತಾಳಿರುವರು ಬಾಳಲು
ನೋಯಲೆಂದೆ ಕೆಲವರು

ಕಿಡಿ ಮಾತನು ಕಾರಿ
ಹಿಡಿ ಧೂಳನು ತೂರಿ
ಕದ ಬಡಿದರು ಕಂಗೆಡದಿರು
ಜೀವದ ಧೃತಿ ತೀರಿ

ತಾಳಿದವರೆ ಗೆಲುವರು
ಆಳಗಳಿಗೆ ಇಳಿವರು
ನೋವು ಕಡೆದ ಮೆಟ್ಟಲೇರಿ
ಶಿಖರಗಳಲಿ ಮೆರೆವರು

                                                 ಡಾll ಎನ್. ಎಸ್ ಲಕ್ಷ್ಮಿನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: