ಮಂಗಳವಾರ, ನವೆಂಬರ್ 16, 2010

ಬಾ ಬಾ ಒಲವೇ 

ಬಾ ಬಾ ಓ ಒಲವೇ 
ಬಂಜೆಯೆದೆಯಲ್ಲಿ ಬೆಳೆ
ಹರಿಸು ಹರುಷದ ಹೊಳೆ
ತೊಳೆದು ಬಾ ಕಳೆದು ಬಾ
ಎಲ್ಲ ಕಲ್ಮಶ ಕೊಳೆ

ಸಂಜೆಗೆಂಪು ಮೊಲ್ಲೆ ಕಂಪು
ನಿನ್ನ ದಾರಿಯಲಿ
ಬಣ್ಣ ಹಾಸಿದೆ ಮಣ್ಣ ಸವರಿವೆ
ಎಲ್ಲ ಮೂಲೆಯಲಿ

ಮಳೆಯ ನೀರಲಿ ತೊಳೆದ ಎಲೆಗಳ
ಎತ್ತಿ ಹಿಡಿದಿವೆ ಮರ
ಬರುವ ದಾರಿಗೆ ತಂಪು ಹಾಸಿವೆ
ಕಾಲು ಕಿತ್ತಿದ ಬರ

ತುಂಬು ಹುಣ್ಣಿಮೆ ಚಂದಿರ ತಂಗಾಳಿ
ಇಂಬು ನಿಲಿಸಿವೆ ಹೂ ಬಳ್ಳಿಗೆ ಬೇಲಿ
ಹರಸಿವೆ ಕರೆಸಿವೆ
ನಂದನವನೆ ಇಲ್ಲಿ

                                                          - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

1 ಕಾಮೆಂಟ್‌:

ಅಮರ ಹೇಳಿದರು...

ನಮಸ್ತೆ,
ಸಾಕಷ್ಟು ಕವನಗಳ ಸಂಗ್ರಹ ನಿಮ್ಮ ಬ್ಲಾಗಿನಲ್ಲಿದೆ, ನೋಡಿ ಖುಷಿಯಾಯಿತು. ಈ ಹಿಂದೆ ನನ್ನಲ್ಲಿರುವ ಹಲವು ಕವನಗಳನ್ನ ಗೂಗಲ್ ಸೈಟಿನಲ್ಲಿ ಹಾಕಿದ್ದೇನೆ. ನಿಮ್ಮ ಬಳಿ ಇರುವ ಕವನಗಳನ್ನ ಇಲ್ಲಿ ಪೋಸ್ಟ್ ಮಾಡಲು ಆಸಕ್ತಿ ಇದ್ದಲಿ ತಿಳಿಸಿ.
http://sites.google.com/site/kavanasangraha/
ವಂದನೆಗಳು
ಅಮರ