ಬುಧವಾರ, ನವೆಂಬರ್ 3, 2010

ಸಂಜೆ


ಬಾನಂಗಳದಲಿ ಮಲಗಿ
ಉಸಿರೆಳೆಯುತ್ತಿದೆ ಹಗಲು
ರೋಗಿಯ ಸುತ್ತಮುತ್ತ
ಮಿಕಿ ಮಿಕಿ ನೋಡುತ್ತ
ತಲ್ಲಣಿಸಿ ಕಾಯುತ್ತಿದೆ ಕೆಂಪಗೆ
ಹತ್ತಾರು ಪುಟ್ಟ ಮುಗಿಲು.
ಬೆಳಗಿನ ಎಳೆಪಾಪ
ಮಧ್ಯಾಹ್ನಕ್ಕೆ ಬೆಳೆದು,
ಮಧ್ಯಾಹ್ನದ ಉರಿ ಪ್ರತಾಪ
ಮುಸ್ಸಂಜೆಗೆ ಕಳೆದು
ಈಗ
ಕತ್ತಲ ಕರಾಳ ಕೋಣ
ಕೆಂಬಾಯಿ ಆಡಿಸುತ್ತ
ಹೂಂಕರಿಸಿ ಬರುತ್ತಿದೆ ನೋಡಿ
ಅಳಿದುಳಿದ ಬೆಳಕನ್ನೂ ಮೇದು.

                                                    - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: