ಮಂಗಳವಾರ, ನವೆಂಬರ್ 23, 2010

ಬನ್ನಿ ಭಾವಗಳೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ

ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ ಮೇಘದ
ಪ್ರೀತಿಯ ಧಾರೆಯಲಿ

ಲೋಕಕೆ ಹೊದಿಸಿದ ಕರಿತೆರೆ ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ ನೇಯುವ
ಹುಣ್ಣಿಮೆ ಹಸ್ತದಲಿ

ಬನ್ನಿ ಬನ್ನಿ ನನ್ನೆದೆಯ ಬಯಲಿದು
ಬತ್ತದ ಕನ್ನೆ ನೆಲ
ಬೆಳೆಯಿರಿ ಇಲ್ಲಿ, ಬಗೆಬಗೆ ತೆನೆಯ
ನಮಿಸುವೆ ನೂರು ಸಲ
ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣ ಕ್ಷಣವೂ
ಎದೆಯನು ಹದಗೊಳಿಸಿ

                                                - ಡಾll ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

2 ಕಾಮೆಂಟ್‌ಗಳು:

-ಕಿರಣಕುಮಾರ ಗಟ್ಟಿ ಹೇಳಿದರು...

ಕನ್ನಡ ಭಾವಗೀತೆಗಳ ಈ ಸಂಗ್ರಹ ತುಂಬಾ ಚೆನ್ನಾಗಿದೆ.
ನಿಮ್ಮೀ ಪ್ರಯತ್ನಕ್ಕೆ ಅಭಿನಂದನೆಗಳು..
-ಕಿರಣಕುಮಾರ ಗಟ್ಟಿ

Unknown ಹೇಳಿದರು...

ಉತ್ತಮ ವಾಗಿದೆ