ತೀ.ನಂ.ಶ್ರೀ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತೀ.ನಂ.ಶ್ರೀ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಡಿಸೆಂಬರ್ 1, 2010

ಒಲವೋ ಹಗೆಯೋ


ಮಿಕ್ಕವರಲಿ ನಗೆಗೂಡುತ ಬೆರೆವೆ
ನನ್ನೊಂದಿಗೆ ಬರಿಗೋಳನೆ ಕರೆವೆ ;
ಒಲವೋ ಹಗೆಯೋ - ಯಾವುದಿದು?

ಹೆರರೇನೆನ್ನಲಿ, ಕೇಳುತ ನಲಿವೆ,
ಸರಸವನಾಡಲು ನನ್ನಲಿ ಮುನಿವೆ ;
ಒಲವೋ ಹಗೆಯೋ - ಯಾವುದಿದು?

ಕುಳಿತರೆ ನಿಂತರೆ ಹುಳಕನೆ ಬಗೆವೆ,
ತುಸು ತಪ್ಪಾದರು ಕಲಹವ ತೆಗೆವೆ ;
ಒಲವೋ ಹಗೆಯೋ - ಯಾವುದಿದು?

ಪ್ರಣಯವ ಬೀರಲು, ಕಪಟವಿದೆನುವೆ,
ಸುಮ್ಮನೆ ಸಾರಲು, ಒಲವಿಲ್ಲೆನುವೆ ;
ಒಲವೋ ಹಗೆಯೋ - ಯಾವುದಿದು?

                                                  - ತೀ. ನಂ. ಶ್ರೀಕಂಠಯ್ಯ