'ಕುಶಲ ಪ್ರಶ್ನೆ' - ವಿಮರ್ಶೆ

      ಕುಶಲ ಪ್ರಶ್ನೆಯಲ್ಲಿ ಒಂದು ಅನುಭವವೇ ಅರ್ಥದ ವ್ಯಾಪಕತೆಯಿಂದ ಜೀವಂತವಾಗಿ ಒಂದು ಪ್ರತಿಮೆಯಾಗುತ್ತದೆ. ಕೆ.ಎಸ್.ನ. ಅವರ ಈಚಿನ ಪ್ರಯೋಗಗಳಲ್ಲಿ ಆಡಂಬರರಹಿತವಾಗಿರುವಲ್ಲಿ ಈ ಕೃತಿ ಆಶ್ಚರ್ಯಕರವಾಗಿ ಮಿರುಗುತ್ತದೆ. ಇದರ ಸರಳತೆಯು ನಮ್ಮ ಕಾವ್ಯದ ಗುಣಗಳ ಕಲ್ಪನೆಯಲ್ಲಿ ಒಂದು ಹೊಸ ಮಿಂಚನ್ನು ಮೂಡಿಸಬಲ್ಲುದಾಗಿದೆ.
      ಮುಖ್ಯ 'ಕುಶಲ ಪ್ರಶ್ನೆ' ಬರಿಯ ಪ್ರಶ್ನೆಯಾಗದೆ ಒಂದು ವ್ಯಕ್ತಿತ್ವವಾಗಿ ಪರಿಣಮಿಸಿ ಕಡೆಗೆ ಅಂತರಂಗದ ಒಂದು ಅಂಶವಾಗಿ ನಿಲ್ಲುತ್ತದೆ. ಆದುದರಿಂದ ಈ ಕವಿತೆಯ ಪರಿಣಾಮ ಪ್ರತಿಯೊಬ್ಬ ಸಾಮಾನ್ಯನೋ, ಅಸಾಮಾನ್ಯನೋ, ತಮ್ಮ ಅಂತರಂಗವನ್ನು ಮುಟ್ಟಿಕೊಳ್ಳುವಂತೆ ಸತ್ವಶಾಲಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅರಿವಿಗೆ ಮೀರಿದ ಸತ್ವವೊಂದು 'ಕುಶಲ ಪ್ರಶ್ನೆ'ಯನ್ನು ಕೇಳುತ್ತದೆ. ಅದು ತಪ್ಪಿದಂತಾದಾಗ ಗೊಂದಲವಾಗುವುದು ಸಹಜ. ಈ ಸತ್ವವೇ ಕೆಲವರಿಗೆ ದೈವಿಕಾಂಶ ಅಥವಾ ಒಳ್ಳೆಯದೆನ್ನುವುದು ಅಥವಾ ಪ್ರತಿಯೊಬ್ಬರೂ ರಕ್ಷಿಸಿಕೊಳ್ಳುವ 'ಮಂಗಳ'ವೆಂಬ ಭಾವುಕತೆ ಅಥವಾ ವಿಚಾರ ಸತ್ವ ಕೂಡ ಇರಬಹುದು. ಹೀಗೆ ಹಲವು ರೂಪಗಳಲ್ಲೂ ಅಸ್ತುವೆನ್ನಿಸಿಕೊಳ್ಳಬಲ್ಲ ಶಕ್ತಿ ಈ ಕವನಕ್ಕಿದೆ.

- ಕ. ವೆಂ. ರಾಜಗೋಪಾಲ
('ಚಂದನ'ದಲ್ಲಿ)

ಕಾಮೆಂಟ್‌ಗಳಿಲ್ಲ: