'ನಿನ್ನೆ ಇದ್ದರು ಅವರು, ಇಂದಿಲ್ಲ..'
ಹಾಡು ಹಳೆಯದಾದರೇನು ಭಾವ ನವ ನವೀನ ಎಂದು ಎದೆ ತುಂಬಿ ಹಾಡಿದ ಕವಿ..
ಪ್ರೀತಿ ಇಲ್ಲದ ಮೇಲೆ ಎಲ್ಲವೂ ಹೇಗೆ ಸಾಧ್ಯ ಎಂದು ಅಚ್ಚರಿಗೊಳಿಸಿದ ಕವಿ..
ಕಾಣದ ಕಡಲನು ಕಾಣಬಲ್ಲೆನೇ,ಕೂಡಬಲ್ಲೆನೇ ಎಂದು ಹಂಬಲಿಸಿದ ಕವಿ..
..ಇನ್ನಿಲ್ಲ..
'ಇನ್ನಿಲ್ಲ' ಎಂಬ ಕಹಿಸತ್ಯವನ್ನೇ ಒಪ್ಪುತ್ತಿಲ್ಲ ಮನಸು. ಅತ್ಯಂತ ಆಪ್ತರೊಬ್ಬರನ್ನು ಕಳೆದುಕೊಂಡಂತೆ ಮನಸು ಭಾರ ಭಾರ.. ಏನು ಮಾಡಲೂ ತೋಚದ ಶೂನ್ಯ ಮನಸು..
ಮೊನ್ನೆ ಮೊನ್ನೆಯೂ ಅವರ ಕವನಗಳನ್ನು ಓದುತ್ತಾ, ಆಸ್ವಾದಿಸುತ್ತಾ ಅವರ ಕವಿಹೃದಯದ ಆಳ-ವಿಸ್ತಾರಗಳ ಬಗೆಗೆ ಯೋಚಿಸಿ ಬೆರಗುಗೊಂಡಿದ್ದೆ. ಕನ್ನಡ ಸಾಹಿತ್ಯ ಲೋಕದಿಂದ ಮತ್ತೊಬ್ಬ ಹಿರಿಯ ಕವಿ ದೂರವಾದರೇ ..? ಇಲ್ಲ, ಹಾಗೆನ್ನಲು ನಾನೊಪ್ಪುವುದಿಲ್ಲ!
ಕಾವ್ಯಪ್ರಿಯರಿರುವವರೆಗೆ, ಹಾಡುಗಾರರಿರುವವರೆಗೆ.. ತಮ್ಮ ಸುಂದರ ಕವಿತೆಗಳಲ್ಲಿ, ಸೊಗಸಾದ ಭಾವಗೀತೆಗಳಲ್ಲಿ ಜಿ.ಎಸ್. ಎಸ್. ಸದಾ ಜೀವಂತವಾಗಿರುವರು..
ಹೌದು, ಕಾವ್ಯಲೋಕದಲ್ಲಿ ನನ್ನ ನೆಚ್ಚಿನ ಕವಿ ಸದಾ ಅಜರಾಮರರು..
ಹನಿಗಣ್ಣಿನಿಂದ,
ಕನಸು..
1 ಕಾಮೆಂಟ್:
nija nammavare yaaro agaliddare annistha ide..
ಕಾಮೆಂಟ್ ಪೋಸ್ಟ್ ಮಾಡಿ