ಆತ್ಮೀಯರೇ,
ಚಲನಚಿತ್ರ ಗೀತೆಗಳ ಮೂಲಕ ಬಹು ಜನಪ್ರಿಯರಾಗಿರುವ ಕವಿ, ಕಥೆಗಾರ ಜಯಂತ ಕಾಯ್ಕಿಣಿಯವರು ಕನ್ನಡ ಕಾವ್ಯದಲ್ಲಿಯು ಸಹ ವಿಭಿನ್ನ ಛಾಪು ಮೂಡಿಸಿದ್ದಾರೆ. ಸದ್ಯಕ್ಕೆ ನಾನು ಅವರ 'ಒಂದು ಜಿಲೇಬಿ' ಕವಿತಾ ಸಂಗ್ರಹದ ಕವಿತೆಗಳಲ್ಲಿ ಕಳೆದುಹೋಗಿದ್ದೇನೆ.
ಪ್ರತಿ ಕವಿತೆಯೂ ತುಟಿಯಲ್ಲಿ ಕಿರುನಗೆ ಮೂಡಿಸುವಂತೆ ಭಾಸವಾಗುತ್ತಲೇ ಮನದಾಳದಲ್ಲಿ ವಿಷಾದದಲೆಗಳನ್ನೆಬ್ಬಿಸುತ್ತದೆ...
'ರವಿ ಕಾಣದ್ದನ್ನು ಕವಿ ಕಾಣಬಲ್ಲ' ಎಂಬುದು ನಿರೂಪಿತವಾಗುವಂತೆ ಕಾಯ್ಕಿಣಿಯವರು ವಸ್ತು-ವ್ಯಕ್ತಿಗಳನ್ನು ಗಮನಿಸುವ ರೀತಿ ಅದ್ಭುತವಾದುದು. ಅವರ ಕವಿತೆಗಳಲ್ಲಿನ ಹೋಲಿಕೆ, ಪ್ರತಿಮೆಗಳು ದಿನ ನಿತ್ಯ ನಾವು ಗಮನಿಸಿಯೂ ಗಮನಿಸದ ಎಷ್ಟೋ ಚಿತ್ರಗಳನ್ನು ಕಣ್ಣ ಮುಂದೆ ತರುತ್ತವೆ.ನವ್ಯ ಕಾವ್ಯದಂತೆ ವಾಚ್ಯವೆನ್ನಿಸುತ್ತಲೇ ರಮ್ಯ ಕಾವ್ಯವನ್ನೂ ನೆನೆಸುತ್ತವೆ. ಈ ಸಂಕಲನದ ಕೆಲವು ಕವಿತೆಗಳು ನಿಮಗಾಗಿ..
ಅಕ್ಕರೆಯಿಂದ,
ಕನಸು..