ಮಂಗಳವಾರ, ಮಾರ್ಚ್ 13, 2012

- -  ಗೆ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ  ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                                 - ಕೆ. ಎಸ್. ನರಸಿಂಹಸ್ವಾಮಿ
                                    ' ಮೈಸೂರು ಮಲ್ಲಿಗೆ '

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕಾವ್ಯಗಳ ಒಳ್ಳೆಯ website, thank you

talegari (ತಾಳೆಗರಿ) ಹೇಳಿದರು...

ನಿಮ್ಮ ಬ್ಲಾಗು ನೋಡಿ ಸಂತೋಷವಾಯ್ತು. ಒಳ್ಳೆಯ ಕವಿತೆಗಳನ್ನು ಓದುವಂತೆ ಮಾಡಿದ್ದೀರಿ, ಧನ್ಯವಾದಗಳು. ಹೀಗೇ ಮುಂದುವರೆಸಿ.

maanasa saarovra ಹೇಳಿದರು...

ಕನಸು ಅವರೇ ನಿಮ್ಮ ಪ್ರಯತ್ನ ಶ್ಲಾಘನೀಯ. ಿದನ್ನು ದಯವಿಟ್ಟು ನಿಲ್ಲಿಸಬೇಡಿ. ಈ ನಿಮ್ಮ ಬ್ಲಾಗ್ ನ ಪ್ರೇರಣೆಯಿಂದ ವಿಷಯಗಳನ್ನು ಬೇರೆ ಹಾಕಿಕೊಂಡು ಇನ್ನೊಂದು ಬ್ಲಾಗ್ನ ಕನಸು ನನ್ನಲ್ಲಿ ಹುಟ್ಟಿದೆ. ಸಾಧ್ಯವಾದರೆ ದಯವಿಟ್ಟು ನಿಮ್ಮ ಸಂಪರ್ಕಿಸುವ ವಿಧಾನ ತಿಳಿಸಿ. ಇಲ್ಲ ನನಗೆ ಒಂದು ಪುಟ್ಟ ಮೇಲ್ ಮಾಡಿ. ನಿಮ್ಮ ನಿರೀಕ್ಷೆಯಲ್ಲಿ..

sirisobagu@gmail.com

ಕನಸು.. ಹೇಳಿದರು...

ಧನ್ಯವಾದಗಳು.. :)
mail me: kanasu29@yahoo.com