ಸೋಮವಾರ, ಫೆಬ್ರವರಿ 20, 2012

ಬೆಸುಗೆ


ಮುಂಗಾರಿನ.ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು.

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯಂಥ ಹಸಿರು.

ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿಯಿಂಪು
ನಾಳೆಗೆ ನನಸಾಗುವ ಕನಸಿನ
ಹೂವರಳುವ ಕಂಪು.

ಭರವಸೆಗಳ ಹೊಲಗಳಲ್ಲಿ
ನೇಗಿಲ - ಗೆರೆ ಕವನ
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ.

                         - ಜಿ.ಎಸ್. ಶಿವರುದ್ರಪ್ಪ
                       'ಚಕ್ರಗತಿ'

1 ಕಾಮೆಂಟ್‌:

Ananda_KMR ಹೇಳಿದರು...

ನಾನು ಇದು ಲಕ್ಷ್ಮಿ ನಾರಾಯಣ ಭಟ್ಟ ರದ್ದು ಅನ್ಕೋಂಡಿದ್ದೆ