ಗುರುವಾರ, ಜನವರಿ 19, 2012

ನಿನ್ನಿಂದ

ಜೀವ ಬಂದಂತೆ
ಸವಿಭಾವ ಬಂದಂತೆ
ಇನಿಯಾ, ನೀ ಬಂದೆ
ನೀ ಬಂದೆ ನನ್ನ ಬಾಳಿಗೆ

ನಿನ್ನ ನೋಟವೆ ಚುಂಬಕ
ನಿನ್ನ ನಗೆಯೋ ಮೋಹಕ
ನಾ ಸೋತೆ, ಶರಣಾದೆ
ನಿನ್ನ ಸ್ಪರ್ಶಕೆ
ಮಿಂಚು ಹರಿದಂತೆ
ನನ್ನ ಧಮನಿ ಧಮನಿಯಲಿ
ಘಲ್ಲೆಂದು ಈ ಮೊಗ್ಗರಳಿ
ಹೂವಾಯಿತು

ಬಂತು ಹೂವಿಗೆ ಪರಿಮಳ
ಬಣ್ಣದೋಕುಳಿ ದಳದಳ
ಈ ಅಂದ ಮಕರಂದ
ಎಲ್ಲಾ ನಿನ್ನಿಂದ
ಪ್ರೀತಿ ನೀನೆರೆದೆ
ನನ್ನ ಬಾಳ ಬೇರಿಗೆ
ಈ ಹೂವು ಕಾಯಾಗಿ
ಹಣ್ಣಾಯಿತು

                                   - ಬಿ. ಆರ್. ಲಕ್ಷ್ಮಣರಾವ್

1 ಕಾಮೆಂಟ್‌:

Ananda_KMR ಹೇಳಿದರು...

ಈ ಭಾವಗೀತೆಯನ್ನ ಎದೆ ತುಂಬಿ ಹಾಡುವೆನು ಪ್ರೋಗ್ರಮ್ನಲ್ಲಿ ಕೇಳಿದ್ದೆ.
ಧನ್ಯವಾದ ಇದನ್ನ post ಮಾಡಿದ್ದಕ್ಕೆ