ಗಜಲ್ ೧೦
ಹೋಗುವಾಗ ಕಂಬನಿಗಳ ತುಳುಕಿಸದಿರು ಎನ್ನುವನು
ಕಳೆದ ಕ್ಷಣಗಳ ಸವಿಯ ಬಾಡಿಸದಿರು ಎನ್ನುವನು
ಎಂದಿದ್ದರೂ ಮಳೆ ಬೆಟ್ಟಗಳ ಸಂಬಂಧ ನಮ್ಮದು
ಇನಿತಾದರೂ ದೊರೆತದ್ದು ಮರೆಯದಿರು ಎನ್ನುವನು
ಖುಷಿಯೂ ಉದಾಸವೂ ಆಗುವುದು ಅವನು ಬಂದಾಗ
ಕಳೆವ ಕೆಲ ಗಳಿಗೆಯಲಿ ದುಗುಡಗೊಳ್ಳದಿರು ಎನ್ನುವನು
ಸಂಜೆ ಕರಗಿ ಹೋಗುವುದು ನೋಡುನೋಡುತ್ತಿರುವಂತೆ
ಕೆಲವು ತಾಸುಗಳ ಮಿಲನವ ದೂರದಿರು ಎನ್ನುವನು
ಅವ್ಯಕ್ತ ನೋವಿನಲಿ ಅಯ್ಯೊ ದೀಪವೂ ಸುಯ್ಯುತಿದೆ
ಗಲ್ಲ ತಟ್ಟುತ ಯಾಕೆ ಈ ನಿಟ್ಟುಸಿರು ಎನ್ನುವನು
ನೋವು ತರುವ ಇಂಥ ಪ್ರೀತಿ ಬೇಡವೇ ಬೇಡ
ಮುತ್ತಿಡುತ್ತ ಸಿಗದುದಕೆ ಮರುಗದಿರು ಎನ್ನುವನು
- ಎಚ್.ಎಸ್. ಮುಕ್ತಾಯಕ್ಕ
1 ಕಾಮೆಂಟ್:
ಬಹಳ ಸುಂದರ ಕಾವ್ಯ , ಅದರ ಹರಿತ .ಮೊಗೆದಸ್ತು ಹೊಸ ಅರ್ಥ ಗಳ ಸುಳಿ . ಮುಕ್ತಾಯಕ್ಕ ನವರ ಈ ಘಜಲ್ ಗಳನ್ನು ಸಂಕಳಿಸಿ ಬ್ಲಾಗಿನಲ್ಲಿ ಹಾಕಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು . ಹಾಗೇನೆ ಹೆಸರಾಂತ ಕವಿಗಳ ಕವನಗಳನ್ನು ಓದಿ ರಸ ದೂಟ ಮಾಡಿದಸ್ತು ಸಂತಸವಾಯಿತು
ನಿಮ್ಮ ಪ್ರಯತ್ನ , ಸಾಹಿತ್ಯಾಭಿಮಾನ ಶ್ಲಾಘನೀಯ . ಶುಭಾಶಯಗಳು .
ಆದರೆ ನನ್ನ ಬ್ಲಾಗಿಗೂ ಭೇಟಿ ನೀಡಿ
www.bhaavatorana.blogspot.com
ಕಾಮೆಂಟ್ ಪೋಸ್ಟ್ ಮಾಡಿ