ವೀಣಾಗಾನ
ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.
ಭುವನವೆಲ್ಲ ಸವಿಯ ಸೊಲ್ಲ
ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.
ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.
- ಕುವೆಂಪು
' ಪ್ರೇಮ ಕಾಶ್ಮೀರ '
2 ಕಾಮೆಂಟ್ಗಳು:
ಕನಸು,
ನಿಮ್ಮ ಬಳಿ ಈ ಪದ್ಯ ಇದ್ರೆ ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ :
ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇs
ಹೆಸರನಿಡುವೆ ಉಸಿರಕೊದುವೆ
ಬನ್ನಿ ನನ್ನ ಹೃದಯಕೆ
ರಚನೆ ಗೊತ್ತಿಲ್ಲ ....FM ನಲ್ಲಿ ಒಂದ್ಸಾರಿ ಕೇಳಿದ್ದೆ ...ಹಾಡಿರೋರು ಸಿ. ಅಶ್ವಥ್
ಖಂಡಿತ ಪ್ರಯತ್ನಿಸ್ತೀನಿ ಆನಂದರವರೆ..
ಕಾಮೆಂಟ್ ಪೋಸ್ಟ್ ಮಾಡಿ